ಉಬುಂಟು - ಮಾನವ ಕುಲಕ್ಕೆ ಲಿನಕ್ಸ್ ! (Ubuntu - Linux For Humans!)
A Brief :
ಉಬುಂಟು ಎಂಬುದು ಆಫ್ರಿಕಾದ ಜನಪದದಲ್ಲಿ ಮೂಡಿ ಬರುವ ಶಬ್ಧ. ‘ಇತರರೆಡೆಗೆ ಮಾನವೀಯತೆ’ ಎಂಬಂತಹ ನೀತಿಗೆ ಉಬುಂಟು ಎಂದು ಕರೆಯುವ ಪ್ರತೀತಿ. ಉಬುಂಟು ಲಿನಕ್ಸ್, ಡೆಬಿಯನ್ ವಿತರಣೆಯನ್ನಾಧರಿಸಿ ತರಲಾದ ಒಂದು ಲಿನಕ್ಸ್ ವಿತರಣೆ. ದಕ್ಷಿಣ ಆಫ್ರಿಕಾದ ಕೆನಾನಿಕಲ್ ಕಂಪೆನಿಯು ಈ ಯೋಜನೆಯನ್ನು ಪ್ರಾಯೋಜಿಸುತ್ತಿದೆ. (ಕೆನಾನಿಕಲ್ ಕಂಪೆನಿಯ ಮಾಲೀಕ ಮಾರ್ಕ್ ಷಟ್ಟಲ್ ವರ್ತ್).
ಪ್ರತಿ ಆರು ತಿಂಗಳಿಗೆ ಹೊಸ ಬಿಡುಗಡೆಗಳನ್ನೊಳಗೊಂಡ ಕಾರ್ಯನೀತಿಯನ್ನು ರೂಡಿಸಿಕೊಂಡಿರುವ ಈ ವಿತರಣೆಯ ಸಮುದಾಯ, ಆಕರವನ್ನು ಹಾಗೂ ಬೈನರಿಗಳನ್ನೂ ಮುಕ್ತವಾಗಿ ನೀಡುತ್ತದೆ. ಉಚಿತವೂ ಹೌದು. ಅಲ್ಲದೇ ಅಂತರಜಾಲದಿಂದ ಇದನ್ನು ಪಡೆಯಲಾಗದವರಿಗೆ ಉಬುಂಟು ಉಚಿತವಾಗಿ ಸಿಡಿಗಳನ್ನು ಮನೆಯ ಬಾಗಿಲಿಗೆ ತಲುಪಿಸುತ್ತದೆ.
| ಉದ್ಯಮ / ವಿನ್ಯಾಸಗಾರ | Canonical Ltd. / Ubuntu Foundation |
|---|---|
| ಗಣಕಯಂತ್ರದ ಕಾರ್ಯನಿರ್ವಹಣ ಸಾಧನದ ವರ್ಗ | Unix-like |
| Working state | Current |
| Source model | ಮುಕ್ತ ತಂತ್ರಾಂಶ |
| Initial release | ೨೦ ಅಕ್ಟೋಬರ ೨೦೦೪ |
| ಅತಿನೂತನ ಸ್ಥಿರವಾದ ಬಿಡುಗಡೆ | 9.10 / 2009-10-29 |
| ಅತಿನೂತನ ಅಸ್ಥಿರ ಬಿಡುಗಡೆ | ೧೦.೦೪ ಅಲ್ಫಾ ೧ / 2009-12-10 |
| ಬಳಸಬಲ್ಲಭಾಷೆ(ಗಳು) | ಬಹುಭಾಷಿಕ (೫೫ ಕ್ಕೂ ಹೆಚ್ಚು) |
| ಆಧುನಿಕಗೊಳಿಸು ಆಕೃತಿ | APT (front-ends available) |
| (ಗಣಕಯಂತ್ರದ) ಕಟ್ಟು ನಿರ್ವಾಹಕ | dpkg (front-ends like Synaptic available) |
| ಆಧಾರಿತ ವೇದಿಕೆ | IA-32, x86-64, lpia, SPARC, PowerPC, ARM, IA-64 |
| ಕರ್ನೆಲ್ ಶ್ರೇಣಿ | Monolithic (Linux) |
| Userland | GNU |
| (ಗಣಕಯಂತ್ರದ) ಪೂರ್ವನಿಯೋಜಿತಬಳಕೆದಾರರ (ಗಣಕಯಂತ್ರದ) ಅಂತರ ಸಂಪರ್ಕ ಸಾಧನ | GNOME |
| ಲೈಸನ್ಸು | Mainly the GNU GPL / plus various other licenses |
| ಅಂತರ್ಜಾಲ |
Posted on Tuesday May 4th